• 17 - B, Sadaramangala Industrial Area, Whitefield Road, Bangalore - 560 048
  • 17 - B, Sadaramangala Industrial Area, Whitefield Road, Bangalore - 560 048

2023ರ ರಾಜಕೀಯ ಚುನಾವಣೆಗಳು
ಕರ್ನಾಟಕ ಚುನಾವಣೆಗಳು ಭಾಷೆ, ಜಾತಿ, ಪಕ್ಷಗಳ ಸಿದ್ದಾಂತಕ್ಕಿಂತ ವಿಭಿನ್ನ ದೃಷ್ಟಿಕೋನಗಳಲ್ಲಿ ನಡೆಯುತ್ತಿದ್ದು 1952 ರಿಂದ 2019 ರ ವರೆಗೆ 17ಚುನಾವಣೆಗಳು ನಡೆದಿದ್ದು 18 ನೇ ಚುನಾವಣೆಯು ಇದೇ ಮೇ ಒಳಗಾಗಿ ನಡೆಯಬೇಕಾಗಿದೆ. ಈ ಹಿಂದಿನ 17 ಚುನಾವಣೆಗಳು ಒಂದೊಂದು ಚುನಾವಣೆಯಲ್ಲೂ ಒಂದೊಂದು ವಿಚಾರಗಳಿಗೆ ಜನತೆಯು ಒಲವು ತೋರಿದಂತೆ ಕಾಣುವುದಿಲ್ಲ. ದಕ್ಷಿಣ ಭಾರತದಲ್ಲಿ ತಮಿಳುನಾಡು, ಆಂಧ್ರ, ತೆಲಾಂಗಣ, ಮಹಾರಾಷ್ಟ್ರ ರಾಜ್ಯಗಳು ಭಾಷೆ ಮತ್ತು ಜಾತಿ ಆಧಾರದ ಮೇಲೆ ಚುನಾವಣೆಗಳು ನಡೆಯುತ್ತಿದ್ದು ಕೇರಳ ರಾಜ್ಯವು ಕಮ್ಯುನಿಷ್ಟ್ ಸಿದ್ದಾಂತಗಳ ಮೇಲೆ ಚುನಾವಣೆ ನಡೆಯುತ್ತಿದ್ದು ಆದರೆ ಈ ರಾಜ್ಯಗಳ ಮಧ್ಯೆ ಇರುವ ಕರ್ನಾಟಕದಲ್ಲಿ ವಿಭಿನ್ನ ದೃಷ್ಟಿಕೋನದ ಮತದಾರನನ್ನು ಹೊಂದಿದ ಚುನಾವಣೆ ನಡೆಯುತ್ತದೆ. ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಮತದಾರ ಒಲವು ತೋರುತ್ತಿಲ್ಲ ಆದರೆ ಪ್ರಾದೇಶಿಕ ಪಕ್ಷಗಳನ್ನು ತಿರಸ್ಕಾರವು ಮಾಡಿಲ್ಲ. ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯತೆ, ಪ್ರಾದೇಶಿಕತೆ, ಭಾಷೆ, ಜಾತಿ ಧರ್ಮಗಳÀ ಲೆಕ್ಕಾಚಾರ ಮತ್ತು ಪ್ರಸ್ತುತ ಸಮಸ್ಯೆಗಳು, ಮೂಲಭೂತ ಅಭಿವೃದ್ಧಿ ಹೀಗೆ ಹಲವಾರು ವಿಚಾರಗಳಲ್ಲಿ ಚುನಾವಣೆಗಳು ನಡೆಯುತ್ತಿರುವುದರಿಂದ ಕರ್ನಾಟಕದಲ್ಲಿ ಚುನಾವಣೆಯನ್ನು ಗೆಲ್ಲುವುದು ಅತ್ಯಂತ ಕಷ್ಟಕರವಾಗಿದೆ.
2023 ರ ಚುನಾವಣೆಯ ಸವಾಲುಗಳು.
1. ಮತದಾರರಲ್ಲಿ ರಾಜಕೀಯ ವಿಮುಖ ನೀತಿ.
2. ರಾಜಕೀಯ ಪಕ್ಷಗಳ ಮತ್ತು ರಾಜಕಾರಣನಿಗಳ ದ್ವಂದ್ವ ಪರಿಕಲ್ಪನೆ.
3. ಪ್ರಜಾಪ್ರಭುತ್ವದ ಬಗ್ಗೆ ಒಲವು ಕಡಿಮೆಯಾಗುತ್ತಿರುವುದು.
4. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ನೀತಿಗಳ ಬಗ್ಗೆ ನಂಬಿಕೆ ಕಳೆದುಕೊಂಡಿರುವುದು.
5. ಸಂಘಟನೆಯ ಕೊರತೆ.
6. ರಾಜಕೀಯ ಮೌಲ್ಯಗಳ ಕುಸಿತ.
7. ಕರೋನ ನಂತರ ಮತದಾರರಲ್ಲಿ ನವೀನ ಪ್ರಜ್ಞಾವಂತಿಕೆ ಮತ್ತು ಸಾಮಾಜಿಕ ಜಾಲತಾಣಗಳು ಸೇರಿದಂತೆ ಟೆಲಿವಿಷನ್ ಮಾಧ್ಯಮದ ಮೇಲೆ ನಂಬಿಕೆ ಕಡಿಮೆಯಾಗಿರುವುದು.
8. ಕರ್ನಾಟಕದಲ್ಲಿ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ದೃಷ್ಟಿಕೋನದ ಮತದಾರ ಇರುವುದು. ಇನ್ನು ಈ ಮೇಲಿನ ಸವಾಲುಗಳ ಜೊತೆಗೆ ರಾಜಕಾರಣಿಗಳ ಕಿತ್ತಾಟ , ಭ್ರಷ್ಟಾಚಾರ ಜಾತಿ ಧರ್ಮಗಳ ದಂಗಲ್ ಇಂತಹ ಹಲವಾರು ಕಾರಣಗಳು 2023 ರ ಚುನಾವಣೆಯ ಫಲಿತಾಂಶವನ್ನು ನಿರ್ಧಾರ ಮಾಡುತ್ತವೆ

ಗೆಲುವಿಗೆ ತಂತ್ರಗಳು
ಈ ಚುನಾವಣೆಯಲ್ಲಿ ವ್ಯಕ್ತಿ, ಪಕ್ಷ ಅಥವಾ ಹಣ ಖರ್ಚು ಮಾಡುವುದರಿಂದ ಗೆಲ್ಲಲು ಸಾಧ್ಯವಿಲ್ಲ. ಏಕೆಂದರೆ ಈ ಚುನಾವಣೆಯಲ್ಲಿ ಮತದಾರನ ದೃಷ್ಟಿಕೋನವು ವಿಭಿನ್ನವಾಗಿದ್ದು ಎಲ್ಲಾ ಸಮೀಕ್ಷೆಗಳು ಸುಳ್ಳಾಗುವ ಸಾಧ್ಯತೆಗಳಿವೆ. ಬೇರೆ ಬೇರೆ ಸಂಸ್ಥೆಗಳು ಮಾಡುವ ಸಮೀಕ್ಷೆಗಳು ಕರ್ನಾಟಕದಲ್ಲಿ ಚುನಾವಣೆ ನಿರ್ಧಾರ ಮಾಡುವಲ್ಲಿ ಪರಿಪೂರ್ಣವಾಗುವುದಿಲ್ಲ ಹಾಗಾದರೆ ಈ ಚುನಾವಣೆ ಗೆಲ್ಲಲು ಪಂಚ ಸೂತ್ರಗಳು ನಮ್ಮಲ್ಲಿವೆ.
1. ಹೊಸ ಆಶಾಕಿರಣ ಬಿತ್ತುವುದು
2. ಮತದಾರರ ವಿಂಗಡಣೆಯನ್ನು ತಾಂತ್ರಿಕ ವಿಧಾನಗಳಿಂದ ಮಾಡುವುದು
3. ಆಧುನಿಕ ಪ್ರಚಾರದ ಜೊತೆಗೆ ಸಂಪ್ರಾದಾಯಿಕ ವಿಧಾನಗಳ ಮೂಲಕ ಪ್ರÀಚಾರ ಮಾಡುವುದು. ಉದಾ: ಸಾಮಾಜಿಕ ಜಾಲತಾಣಗಳನ್ನು ಬಿಟ್ಟು ಪತ್ರಿಕಾ ಮಾಧ್ಯಮದ ಮೂಲಕ ಪ್ರಚಾರ ಮಾಡುವುದು.
4. ಗೆಲುವಿನ ತಂತ್ರದ ಜೊತೆಗೆ ಎದುರಾಳಿಯನ್ನು ಸೋಲಿಸಲು ಪ್ರತಿ ತಂತ್ರಗಳನ್ನು ರೂಪಿಸಬೇಕು.
5. ಪ್ರಚಾರದ ಜೊತೆಗೆ ಜನ ಸಂಪರ್ಕ ಮತ್ತು ಸಂಘಟನೆ ಮಾಡುವುದು. ಈ ಪಂಚ ಸೂತ್ರಗಳ ಜೊತೆಗೆ ಈ ಚುನಾವಣೆಯಲ್ಲಿ ಹಣ, ಜಾತಿ, ಪ್ರಭಾವ ಬಳಕೆಗೆ ಬರುವುದು ಶೇ 10% ಕ್ಕಿಂತ ಕಡಿಮೆ.

ಮುಂದೇನು?
ಕನಸಿನ ಭಾರತ ಸಂಸ್ಥೆಯು 224 ಕ್ಷೇತ್ರಗಳಲ್ಲಿ ಒಂದು ವರ್ಷದಿಂದ ಸುದೀರ್ಘವಾದ ಸಮೀಕ್ಷೆ ಮತ್ತು ಡಾಟಾಗಳ ಸಂಗ್ರಹದಲ್ಲಿ ತೊಡಗಿದ್ದು ಈ ಸಮೀಕ್ಷೆಯಿಂದ ಅತ್ಯಂತ ಆಶ್ಚರ್ಯಕರವಾದ ಫಲಿತಾಂಶ ಬಂದಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿದಂತೆ ಇತರ ಪಕ್ಷಗಳ ಅಭ್ಯರ್ಥಿಯ ಹಣಾಹಣಿಯಲ್ಲಿ ಹಲವಾರು ಪ್ರಭಾವಿ ರಾಜಕಾರಣಿಗಳ ಸೋಲು ಹಲವರ ಗೆಲುವು, ಈಗಾಗಲೇ ಮತದಾರನ ಮನಸ್ಸಿನಲ್ಲಿ ನಿರ್ಧಾರವಾಗಿದೆ. ಈ ಸಮೀಕ್ಷೆಯಿಂದ ಇನ್ನು ಮುಂದಿನ ದಿನಗಳಲ್ಲಿ ಪ್ರಚಾರದ ವಿಧಾನಗಳು ಮತ್ತು ಮತದಾರರಲ್ಲಿ ಇನ್ನುಳಿದ ದಿನಗಳಲ್ಲಿ ಬದಲಾವಣೆ ಮಾಡುವ ತಂತ್ರಗಳನ್ನು ರೂಪಿಸಲಾಗಿದ್ದು ನಿಮ್ಮ ಮಾಧ್ಯಮದ ಹೊಣೆ ನೀಡುವುದಾದರೆ ಸಂಪೂರ್ಣ ಚಿತ್ರಣವನ್ನು ಮತ್ತು ಮಾಹಿತಿಯನ್ನು ನೀಡಲಾಗುತ್ತದೆ.

ಈ ತಪ್ಪು ಮಾಡಬೇಡಿ
1. ನಾನೇ ಗೆಲ್ಲುತ್ತೇನೆಂಬ ಭ್ರಮೆಯಲ್ಲಿ ಬದುಕಬೇಡಿ.
2. ಸೋಷಿಯಲ್ ಮೀಡಿಯಾವನ್ನು ಅತಿಯಾಗಿ ನಂಬಿ ಮೋಸ ಹೋಗಬೇಡಿ. ಏಕೆಂದರೆ ಸೋಷಿಯಲ್ ಮೀಡಿಯಾಗಳ ಬಗ್ಗೆ ಜನರ ದೃಷ್ಟಿಕೋನ ಬದಲಾಗಿದೆ.
3. ಟಿವಿ ಮಾಧ್ಯಮ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸಲು ಸಾಧ್ಯವಿಲ್ಲ. ಖಿಖP ಮತ್ತು ಜನರ ನಂಬಿಕೆ ಬದಲಾಗುತ್ತ್ತಿದೆ.
4. ಹಣ ಹಂಚುವುದರಿಂದ ಮತ ಬರುವುದಿಲ್ಲ.
5. ಪ್ರಭಾವ, ಜಾತಿ ಗಿಮಿಕ್ ನಿಂದ ಗೆಲ್ಲಲು ಅಸಾಧ್ಯ

ಚುನಾವಣೆಯಲ್ಲಿ ಗೆಲುವಿನ ನಿರ್ಧಾರಗಳು ಅತ್ಯಂತ ರಹಸ್ಯದಿಂದ ಕೂಡಿದೆ. ಒಮ್ಮೆ ಗೆದ್ದರೆ 5 ವರ್ಷ ಅಧಿಕಾರ ಇಲ್ಲದಿದ್ದರೆ ರಾಜಕೀಯ ಅಜ್ಞಾತವಾಸ ಸರಿಯಾದ ನಿರ್ಧಾರ ಸಮಯೋಚಿತ ವಿಚಾರ, ತಂತ್ರ ಮತ್ತು ಪ್ರತಿ ತಂತ್ರಗಳನ್ನು ಚಾಣಾಕ್ಷತೆಯಿಂದ ರೂಪಿಸುವುದರಿಂದ ಶೇ 100% ರಷ್ಟು ಗೆಲ್ಲಬಹುದು.

ಕನಸಿನ ಭಾರತ ಪತ್ರಿಕೆಯ ಹಿನ್ನೆಲೆ
ಕನಸಿನ ಭಾರತವು 2011 ರಿಂದ ಮಾಧ್ಯಮ ಕ್ಷೇತ್ರವು ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತನ್ನದೇ ಆದ ವಿಶಿಷ್ಟ ಮತ್ತು ಹೊಸ ದೃಷ್ಟಿಕೋನದ ಛಾಪನ್ನು ಮೂಡಿಸಿದೆ. RNI ಇಲಾಖೆಯಿಂದ ಒಂದೇ ಹೆಸರಿನಲ್ಲಿ ದಿನ, ವಾರ, ಪಾಕ್ಷಿಕ ಮತ್ತು ಮಾಸ ಪತ್ರಿಕೆಗಳಿಗೆ ಅನುಮತಿ ಪಡೆದ ದೇಶದ ಏಕೈಕ ಪತ್ರಿಕೆಯಾಗಿದೆ. ಆಧುನಿಕ ಭಾರತದ ಪತ್ರಿಕಾ ರಂಗದಲ್ಲಿ ಸಕಾರಾತ್ಮಕ ಆಲೋಚನೆಗಳನ್ನು ತಂದ ಪತ್ರಿಕೆಯಾಗಿದ್ದು ಪತ್ರಿಕಾ ರಂಗದ ಜೊತೆಗೆ ಸಾಧಕರ ಅನಾವರಣ , ಪ್ರತಿಭೆಗಳಿಗೆ ಅವಕಾಶ, ಸಮಾಜ ಸೇವೆ, ಸಂಶೋಧನೆ, ರಾಷ್ಟ್ರೀಯತೆ, ಭಾಷಾಭಿಮಾನ, ದೇಶಾಭಿಮಾನ ಮತ್ತು ಧಾರ್ಮಿಕತೆಯೊಂದಿಗೆ ಆಧುನಿಕ ಮತ್ತು ವೈಜ್ಞಾನಿಕ ವಿಚಾರಗಳ ಸಮಚ್ಚಿತ್ತತೆ ಬೆಳೆಸಲು ಹಲವಾರು ಕಾರ್ಯಕ್ರಮಗಳು, ಯೋಜನೆಗಳೊಂದಿಗೆ ಯಶಸ್ಸು ಕಂಡಿದೆ. ಕನಸಿನ ಭಾರತವು ಪತ್ರಿಕಾ ರಂಗದ ಜೊತೆಗೆ ಮೈ ಡ್ರೀಮ್ ಇಂಡಿಯಾ ಟ್ರಸ್ಟ್ ಮತ್ತು ಕನಸಿನ ಭಾರತ ಫೌಂಡೇಶನ್ ವತಿಯಿಂದ ಸಮಾಜ ಸೇವೆ ರಾಜ್ಯದ ಹಲವಾರು ಓಉಔ ಗಳಿಗೆ ದಾರಿದೀಪ, ಸಂಘಟನೆ, ಜಾಗೃತಿ, ಮಾಹಿತಿ ನೀಡುತ್ತಾ ರಾಜ್ಯದಲ್ಲಿ ವಿನೂತನ ಕ್ರಾಂತಿಯನ್ನು ಮಾಡಲಾಗುತ್ತಿದೆ. ಕನಸಿನ ಭಾರತವು ಹಲವಾರು ಸಮೀಕ್ಷೆ ಮತ್ತು ಸಂಶೋಧನೆಗಳ ಮೂಲಕ ವಸ್ತುನಿಷ್ಠ ವರದಿಯ ಜೊತೆಗೆ ಹಲವಾರು ರಾಜಕಾರಣಿಗಳಿಗೆ, ರಾಜಕೀಯ ಪಕ್ಷಗಳಿಗೆ, ಸಂಘ ಸಂಸ್ಥೆಗಳಿಗೆ, NGO ಗಳಿಗೆ, ಕಂಪನಿಗಳಿಗೆ ಮತ್ತು ಶಾಲಾ ಕಾಲೇಜುಗಳಿಗೆ ಸಲಹೆಯನ್ನು ನೀಡುತ್ತಾ ಬಂದಿದೆ.
ಕನಸಿನ ಭಾರತವು ಒಂದು ದೊಡ್ಡ ಸಂಸ್ಥೆಯಾಗಿದ್ದು ಇದರಲ್ಲಿ ರಾಜಕೀಯ ಚಿಂತಕರು, ರಾಜಕಾರಣಿಗಳು , ಶಿಕ್ಷಣ ಪ್ರೇಮಿಗಳು, ಸಂಶೋಧಕರು, ವಿಶ್ಲೇಷಕರು, ಸಾಹಿತಿಗಳು, ಪತ್ರಕರ್ತರು, ಉದಯೋನ್ಮುಖ ಪ್ರತಿಭೆಗಳು ಸೇರಿದಂತೆ ಸಾವಿರಾರು ಜನ ಈ ಸಂಸ್ಥೆಯ ಭಾಗವಾಗಿ ದುಡಿಯುತ್ತಿದ್ದಾರೆ. 300 ಕ್ಕೂ ಅಧಿಕ ಯುವ ಪತ್ರಕರ್ತರಿಗೆ ಕೌಶಲ್ಯಾಭಿವೃದ್ಧಿ, ತರಬೇತಿಯ ಜೊತೆಗೆ ಬೇರೆ ಬೇರೆ ಮಾಧ್ಯಮಗಳಲ್ಲಿ ಕೆಲಸ ಕೊಡಿಸಿದ ಹೆಮ್ಮೆ ಈ ಸಂಸ್ಥೆಯದ್ದಾಗಿದೆ. ಈ ಸಂಸ್ಥೆಗೆ ನಿವೃತ್ತ ನ್ಯಾಯಾಧೀಶರು, ಸರ್ಕಾರದ ಪ್ರಮುಖ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿಗಳು ಪ್ರಗತಿ ಪರರ ವಿಚಾರಗಳು ಸೇರಿದಂತೆ ಹಲವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ 13 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದ ಸಂಸ್ಥೆಯಾಗಿದೆ.

Assign a menu in the Left Menu options.
Assign a menu in the Right Menu options.